KPCC president G.Parameshwar issuing B-Form to its candidates in a resort near International Airport. Main leaders of congress got ticket today. Badami's candidate Devaraj Patil did not get B-Form yet.
ಕಾಂಗ್ರೆಸ್ ಪಕ್ಷ ತನ್ನ 218 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಬಿ-ಫಾರಂ ವಿತರಿಸುವ ಕಾರ್ಯವನ್ನು ಇಂದಿನಿಂದ ಪ್ರಾರಂಭಿಸಿದೆ. ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದಲ್ಲಿರುವ ಸಾದಹಳ್ಳಿಯ ರೆಸಾರ್ಟ್ ಒಂದರಲ್ಲಿ ಮೊಕ್ಕಾಂ ಹೂಡಿರುವ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್, ಕಾರ್ಯಾಧ್ಯಕ್ಷ ದಿಣೇಶ್ ಗುಂಡೂರಾವ್ ಹಾಗೂ ಇತರ ಮುಖಂಡರು ಬಿ-ಫಾರಂ ವಿತರಿಸುತ್ತಿದ್ದು, ಜೊತೆಗೆ ಅಭ್ಯರ್ಥಿಗಳಿಗೆ ಕೆಲವು ಸಲಹೆ ಸೂಚನೆಗಳನ್ನೂ ನೀಡುತ್ತಿದ್ದಾರೆ.